ವಿಶ್ವದ ಅತ್ಯಂತ ಕಿರಿಯ ಬಾಡಿ ಬಿಲ್ಡರ್ – ಆದಿತ್ಯ ’ರೋಮಿಯೋ’ ದೇವ್

 

mini-muscleman-001ಬಾಡಿ ಬಿಲ್ಡರ್ ಎಂದಾಕ್ಷಣ ಚರ್ಮವನ್ನು ಬಿರಿದು ಹೊರಬರುತ್ತಿರುವ ಮಾಂಸಖಂಡಗಳ ಪರ್ವತವೇ ಎದುರಾದಂತೆ ಕಾಣುವ ಭೀಮಾಕಾಯ ಕಣ್ಣಪರದೆಯ ಮುಂದೆ ಬರುತ್ತದೆ.  ಈ ರೂಪದ ಹೃಸ್ವ ಸ್ವರೂಪ ಹೇಗಿರಬಹುದು?

ಇದಕ್ಕೆ ಉತ್ತರ ಆದಿತ್ಯ ’ರೋಮಿಯೋ’ ದೇವ್

ಉತ್ತರ ಭಾರತದ ಫಗ್ವಾರಾ ನಗರದಲ್ಲಿರುವ ಆದಿತ್ಯ ದೇವ್ ಅವರ ಎತ್ತರ ಕೇವಲ ಎರಡಡಿ ಒಂಭತ್ತುಇಂಚು ಮಾತ್ರ. ಭಾರ ಕೇವಲ ಒಂಭತ್ತು ಕೇಜಿ.  ಆದರೆ ಇವರು ಒಂದೂವರೆ ಕೇಜಿಯ ಡಂಬೆಲ್ಲುಗಳನ್ನು ಲೀಲಾಜಾಲವಾಗಿ ಎತ್ತಬಲ್ಲರು, ಉತ್ತಮ ದೇಹದಾರ್ಢ್ಯ ಹೊಂದಿರುವ ಯಾವುದೇ ವಯಸ್ಕರು ಮಾಡಬಹುದಾದ ವ್ಯಾಯಾಮವನ್ನೂ ಮಾಡಬಲ್ಲರು. ಈ ಸಾಧನೆ ಈಗ ಅವರಿಗೆ ವಿಶ್ವದಲ್ಲಿಯೇ ಅತಿಕಿರಿಯ ಬಾಡಿಬಿಲ್ಡರ್ ಎಂಬ ಪಟ್ಟವನ್ನು ತಂದುಕೊಟ್ಟಿದೆ. 

ಫಗ್ವಾರಾದ ಜಿಮ್ ಒಂದರಲ್ಲಿ ಪ್ರತಿದಿನ ಇವರು ವ್ಯಾಯಾಮ ಮಾಡುವುದನ್ನು ನೋಡಲೆಂದೇ ಸಾವಿರಾರು ಜನರು ಆಗಮಿಸಿದ್ದು ಒಂದು ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಅಭಿಮಾನಿಗಳು ಪ್ರೀತಿಪೂರ್ವಕವಾಗಿ ರೋಮಿಯೋ ಎಂಬ ಅನ್ವರ್ಥನಾಮವನ್ನೂ ಅವರ ಹೆಸರಿನ ನಡುವೆ ಜೋಡಿಸಿದ್ದಾರೆ.

ಇತರ ಕುಬ್ಜದೇಹಿಗಳಂತಲ್ಲದೇ ಅವರ ದೇಹದ ಅಂಗಾಂಗಗಳು ಅವರ ಗಾತ್ರಕ್ಕೆ ತಕ್ಕ ಪ್ರಮಾಣದಲ್ಲಿವೆ.  ಹಲವು ವರ್ಷಗಳಿಂದ ಅವರಿಗೆ ತರಬೇತಿ ನೀಡುತ್ತಿರುವ ರಣಜೀತ್ ಪಾಲ್ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.  ಈಗಾಗಲೇ ಹಲವಾರು ಟೀವಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರದರ್ಶನ ನೀಡಿರುವ ಇವರು ಟೀವಿಯಲ್ಲಿ ನಿರೂಪಕರಾಗಿ ಉದ್ಯೋಗ ನಿರ್ವಹಿಸುವ ಕನಸು ಕಾಣುತ್ತಿದ್ದಾರೆ.  

ಪ್ರಸ್ತುತ ಕೇವಲ ದೇಹಪ್ರದರ್ಶನ ಹಾಗೂ ಟೀವಿ ಕಾರ್ಯಕ್ರಮಗಳಿಂದ ಸಾಕಷ್ಟು ಹಣ ಗಳಿಸಬಹುದಾದರೂ ಶ್ರೀಮಂತರಾಗುವ ಇಚ್ಛೆ ಅವರಿಗಿಲ್ಲ. ಸರಳ ಜೀವನ ಹಾಗೂ ವಿಶ್ವದ ಎಲ್ಲೆಡೆಗಳಲ್ಲಿ ಪ್ರವಾಸ ಮಾಡುವ ಹಾಗೂ ಲಂಡನ್ ನಗರದಲ್ಲಿ ಅವರ ಅಚ್ಚುಮೆಚ್ಚಿನ ಜಾಝ್-ಬಿ ತಂಡದೊಂದಿಗೆ ಸಂಗೀತ ಕಾರ್ಯಕ್ರಮ ನೀಡುವ ಹೆಬ್ಬಯಕೆ ಅವರದ್ದು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: