ಭವಿಷ್ಯದ ಮೊಬೈಲ್ ವಿನ್ಯಾಸಗೊಳಿಸಿ – ಹತ್ತು ಲಕ್ಷ ರೂ. ಬಹುಮಾನ ಗೆಲ್ಲಿರಿ

ಇದು ಮೊಬೈಲ್ ಯುಗ, ಮೊಬೈಲ್ ಫೋನ್ ಇಲ್ಲದ ಒಂದು ದಿನವನ್ನೂ ಊಹಿಸುವುದು ಕಷ್ಟ. ಭಿಕ್ಷುಕನಿಂದ ಕೋಟ್ಯಾಧಿಪತಿಯ ಜೇಬಿಗೆ ತಕ್ಕನಾದ ಹತ್ತು ಹಲವು ಬಗೆಯ ವಿನ್ಯಾಸಗಳು. ಪ್ರತಿದಿನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೂರಾರು ಹೊಸ ವಿನ್ಯಾಸಗಳು ಗ್ರಾಹಕನನ್ನು ತಬ್ಬಿಬ್ಬುಗೊಳಿಸುತ್ತವೆ. ಒಂದು ಮೊಬೈಲಿನಲ್ಲಿರುವ ವೈಶಿಷ್ಟ್ಯ ಇನ್ನೊಂದರಲ್ಲಿ ಇರುವುದಿಲ್ಲ. ನೂತನ ಮೊಬೈಲುಗಳಲ್ಲಿ ಅಡಕವಾಗಿರುವ ಎಷ್ಟೋ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕನಿಗೆ ಅರಿವೇ ಇರುವುದಿಲ್ಲ. ಹಾಗಾಗಿ ಹೊಸ ಹೊಸ ಮೊಬೈಲುಗಳು ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಕೊಂಚ ಹಿಂದಿನ ದಿನ ಬಿಡುಗಡೆಯಾದ ಮೊಬೈಲ್ ಮಾರಾಟವಾಗದೇ ಉಳಿದು ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು.

ಈ ನಿಟ್ಟಿನಲ್ಲಿ ಗ್ರಾಹಕರೇ ತಮಗೆ ಸೂಕ್ತವೆಸಿನಿದ ವಿನ್ಯಾಸವನ್ನು ರಚಿಸಿ ಬೇಕಾದ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿ ಕೇವಲ ಅತ್ಯುತ್ತಮ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಖ್ಯಾತ ಸಂಸ್ಥೆ ಎಲ್.ಜಿ. ಹಮ್ಮಿಕೊಂಡಿದೆ.

ಈ ನಿಟ್ಟಿನಲ್ಲಿ ಗ್ರಾಹಕರೇ ಮೊಬೈಲ್ ಫೋನ್ ವಿನ್ಯಾಸಗೊಳಿಸುವ ಸ್ಪರ್ಧೆಯೊಂದನ್ನು ಸಂಸ್ಥೆ ಏರ್ಪಡಿಸಿದೆ. ಎಲ್.ಜಿ. ಡಿಸೈನ್ ದ ಫ್ಯೂಚರ್ ಎಂಬ ಹೆಸರಿನ ಈ ಸ್ಪರ್ಧೆಯಲ್ಲಿ ಒಟ್ಟು ನಲವತ್ತು ಬಹುಮಾನಗಳಿದ್ದು ಅತ್ಯುತ್ತಮ ಮಾದರಿಯ ಮೊಬೈಲ್ ಫೋನ್ ವಿನ್ಯಾಸಕ್ಕೆ ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂಪಾಯಿ) ಬಹುಮಾನವನ್ನು ಘೋಷಿಸಲಾಗಿದೆ.

ಬಹುಮಾನದ ವಿವರಗಳು ಈ ಕೆಳಗಿನಂತಿವೆ:

ಪ್ರಥಮ ಬಹುಮಾನ : ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂ) + ನಲವತ್ತೆರೆಡು ಸಾವಿರ ರೂ ಮೌಲ್ಯದ ಲ್ಯಾಪ್ ಟಾಪ್ ಮತ್ತು ಸಾಫ್ಟ್ ವೇರ್ (ಆಟೋಡೆಸ್ಕ್ ಇಂಡಸ್ಟ್ರಿಯಲ್ ಡಿಸೈನ್)

ಎರಡನೆಯ ಬಹುಮಾನ: ಹತ್ತು ಸಾವಿರ ಡಾಲರ್ (ಸುಮಾರು ಐದು ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)

ಮೂರನೆಯ ಬಹುಮಾನ : ಐದು ಸಾವಿರ ಡಾಲರ್ (ಸುಮಾರು ಎರೆಡೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)

ವಿಮರ್ಶಕರ ಮೆಚ್ಚುಗೆ ಗಳಿಸಿದ ಅತ್ಯುತ್ತಮ ವಿನ್ಯಾಸಕ್ಕೆ : ಮೂರು ಸಾವಿರ ಡಾಲರ್ (ಸುಮಾರು ಒಂದೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ) + ನಾಲ್ಕು ಸಾವಿರ ಡಾಲರ್ (ಸುಮಾರು ಎರಡು ಲಕ್ಷ ರೂ) ಮೌಲ್ಯದ ಉಪಕರಣ

ಮೂವತ್ತೇಳು ಸಮಾಧಾನಕರ ಬಹುಮಾನಗಳು: ತಲಾ ಒಂದು ಸಾವಿರ ಡಾಲರ್ (ಸುಮಾರು ಐವತ್ತು ಸಾವಿರ ರೂ)

ಮೊಬೈಲು ವಿನ್ಯಾಸಗೊಳಿಸಲು ಹೆಚ್ಚು ಹೆಣಗಬೇಕಾದ ಅವಶ್ಯಕತೆಯಿಲ್ಲ. ಎಲ್.ಜಿ. ಸಂಸ್ಥೆಯ ಈ ಕೆಳಗಿನ ತಾಣಕ್ಕೆ ಭೇಟಿ ನೀಡಿ ಹೊಸ ವಿನ್ಯಾಸ ರಚನೆಯನ್ನು ಕ್ರಮಾಂತರವಾಗಿ (ಸ್ಟೆಪ್ ಬೈ ಸ್ಟೆಪ್) ರಚಿಸಿಕೊಳ್ಳಬಹುದು.

http://www.crowdspring.com/project/2283311_lg-design-the-future-competition/access/

ಸ್ಪರ್ಧೆಗೆ ಪ್ರವೇಶಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ ಏಪ್ರಿಲ್ ೨೬, ೨೦೧೦. ವಿಜೇತರ ಪ್ರಕಟಣೆ ಮೇ ೧೪ ರಂದು. ವಿಜೇತರ ಪಟ್ಟಿಯನ್ನು ಈ ಕೆಳಗಿನ ತಾಣದಲ್ಲಿ ಪ್ರಕಟಿಸಲಾಗುವುದು: http://www.crowdspring.com/LG/winners.

ಮತ್ತೇಕೆ ತಡ, ನಿಮ್ಮ ಮೆದುಳಿಗೆ ಕೊಂಚ ಕೆಲಸ ನೀಡಿ. ಭವಿಷ್ಯದಲ್ಲಿ ನಮ್ಮ ಕೈಗಳಲ್ಲಿ ಬರುವ ಮೊಬೈಲ್ ನಿಮ್ಮದೇ ವಿನ್ಯಾಸವಾಗಿರವಬಹುದು. ಒಂದು ವೇಲೆ ಬಹುಮಾನ ಗೆದ್ದರೆ ಮಾತ್ರ ನನಗೊಂದು ಪಾರ್ಟಿ ಕೊಡಲು ಮರೆಯದಿರಿ. ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: